ಬಿಲಿಯನ್ಸ್ ಮತ್ತು ಬಿಲಿಯನ್ಸ್: ಥಾಟ್ಸ್ ಆನ್ ಲೈಫ್ ಅಂಡ್ ಡೆತ್ ಅಟ್ ದಿ ಬ್ರಿಂಕ್ ಆಫ್ ದಿ ಮಿಲೇನಿಯಮ್ 1997 .ಇದು ಕಾರ್ಲ್ ಸಾಗನ್ ಅವರ ಪುಸ್ತಕವಾಗಿದೆ.ಇವರು ಅಮೇರಿಕಾದ ಖಗೋಳಶಾಸ್ತ್ರಜ್ಞ ಮತ್ತು ವಿಜ್ಞಾನ ಜನಪ್ರಿಯಕರು.1996 ರಲ್ಲಿ ಸಾಗನ್ ಅವರು ಮರಣದ ಮೊದಲು ಬರೆದ ಕೊನೆಯ ಪುಸ್ತಕ, ಇದನ್ನು ರಾಂಡಮ್ ಹೌಸ್ ಪ್ರಕಟಿಸಿತು. == ಅವಲೋಕನ == ಜಾಗತಿಕ ತಾಪಮಾನದ ಏರಿಕೆ, ಜನಸಂಖ್ಯ ಸ್ಫೋಟ, ಭೂ ಮಂಡಲದ ಜೀವನ, ನೈತಿಕತೆ ಮತ್ತು ಗರ್ಭಪಾತದ ಚರ್ಚೆಯಂತಹ ವೈವಿಧ್ಯಮಯ ವಿಷಯಗಳನ್ನು ಒಳಗೊಂಡ, ಸಾಗನ್ ಬರೆದ ಪ್ರಬಂಧಗಳ ಸಂಗ್ರಹವೇ ಈ ಪುಸ್ತಕ. ಇದರ ಕೊನೆಯ ಅಧ್ಯಾಯವು ಮೈಲೋಡಿಸ್ಪ್ಲಾಸಿಯಾದೊಂದಿಗಿನ ಅವರ ಹೋರಾಟದ ವಿವರವಾಗಿದೆ, ಅದು ಅಂತಿಮವಾಗಿ ಡಿಸೆಂಬರ್ 1996 ರಲ್ಲಿ ಅವರ ಜೀವವನ್ನು ತೆಗೆದುಕೊಂಡಿತು. ಸಾಗನ್ ಅವರ ಪತ್ನಿ ಆನ್ ಡ್ರುಯಾನ್ ಅವರ ಮರಣದ ನಂತರ ಪುಸ್ತಕದ ಹಿನ್ನುಡಿಯನ್ನು ಬರೆದಿದ್ದಾರೆ. == "ಶತಕೋಟಿ ಮತ್ತು ಶತಕೋಟಿ" == ಕಾಸ್ಮ್ಮೋಸ್ ನ ವೀಕ್ಷಕರಿಗೆ "ಮಿಲಿಯನ್" ಮತ್ತು "ಬಿಲಿಯನ್" ಗಳ ನಡುವೆ ವ್ಯತ್ಯಾಸವನ್ನು ತೋರಿಸಲು, ಸಗಾನ್ "ಬಿ" ಅನ್ನು ಒತ್ತಿ ಹೇಳಿದರು. ಸಗಾನ್ ಎಂದಿಗೂ " ಶತಕೋಟಿ ಮತ್ತು ಶತಕೋಟಿ " ಎಂದೂ ಹೇಳಲಿಲ್ಲ. ಸಗಾನ್ ಮತ್ತು ಸಾರ್ವಜನಿಕರ ಸಂಘದ ಈ ನುಡಿಗಟ್ಟು, ಟುನೈಟ್ ಶೋ ಎಂಬ ಹಾಸ್ಯ ಕೃತಿಯಿಂದ ಬಂದಿದೆ. ಸಾಗನ್ ಪರಿಣಾಮವನ್ನು ವಿಡಂಬಿಸುತ್ತಾ, ಜಾನಿ ಕಾರ್ಸನ್ "ಶತಕೋಟಿ ಮತ್ತು ಶತಕೋಟಿ" ಪದವನ್ನು ಬಳಸಿ , ಅವರನ್ನು ಅಣುಕಿಸಿದ್ದಾರೆ.ಅದಾಗಿಯೂ ಈ ನುಡಿಗಟ್ಟು ಈಗ ಹಾಸ್ಯಮಯ ಕಾಲ್ಪನಿಕ ಸಂಕೇತವಾಗಿದೆ. .ಈ ಆಕರ್ಷಕ ಪದವನ್ನು ಪುಸ್ತಕದ ಶೀರ್ಷಿಕೆಯಾಗಿ ಬಳಸುವುದರ ಹೊರತಾಗಿ, ಸಗಾನ್ ಅವರ ಪರಿಚಯವನ್ನೂ ಚರ್ಚಿಸುತ್ತದೆ. == ಉಲ್ಲೇಖಗಳು == == ಬಾಹ್ಯ ಲಿಂಕ್‌ಗಳು == ಪುಸ್ತಕದ ವಿಮರ್ಶೆ ಜಾನಿ ಕಾರ್ಸನ್ ನಟಿಸಿದ ದಿ ಟುನೈಟ್ ಶೋನ ಸ್ಕಿಟ್ನ ವೀಡಿಯೊ "ಶತಕೋಟಿ ಮತ್ತು ಶತಕೋಟಿ"